ವಿಜಯಪುರದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮ - ವಿಜಯಪುರ ಈದ್ ಮಿಲಾದ್ ಸಂಭ್ರಮ
ವಿಜಯಪುರ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಗುಮ್ಮಟ ನಗರಿಯಲ್ಲಿ ಬೃಹತ್ ಮೆರಣಿಗೆ ನಡೆಸಿದರು. ನಗರದ ಹಾಸಿಮ್ ಫೀರ್ ದರ್ಗಾದಿಂದ ಪ್ರಾರಂಭವಾಗಿದ್ದ ಮೆರವಣಿಗೆ ನಗರದ ಕೇಂದ್ರ ಬಸ್ ನಿಲ್ದಾಣ, ಗಾಂಧಿ ವೃತ್ತ ಮಾರ್ಗವಾಗಿ ದರ್ಬಾರ್ ಕ್ರೀಡಾಂಗಣವರೆಗೆ ಸಾಗಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಅಲ್ಲದೆ ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.