ಶಿವಮೊಗ್ಗದಲ್ಲಿ ಸಂಭ್ರಮದ ಈದ್ ಮಿಲಾದ್: ಗಮನ ಸೆಳೆದ ಟಿಪ್ಪು ಸುಲ್ತಾನ್ - Eid milad procession in shivamogga
ಶಿವಮೊಗ್ಗ: ನಗರದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಮೆರವಣಿಗೆ ಮೂಲಕ ಸಂಭ್ರಮದಿಂದ ಆಚರಿಸಿದರು. ನಗರದ ಗಾಂಧಿ ಬಜಾರ್ನಿಂದ ಪ್ರಾರಂಭವಾದ ಮೆರವಣಿಗೆ ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆ, ಬಿ.ಹೆಚ್. ರಸ್ತೆ, ಟ್ಯಾಂಕ್ ಮೊಹಲ್ಲಾ, ಮಹಾವೀರ ವೃತ್ತದ ಮೂಲಕ ಗೋಪಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಯುವಕರು ಡಿಜೆ ಸೌಂಡ್ಗೆ ನೃತ್ಯ ಮಾಡುತ್ತ ಸಾಗಿದರಲ್ಲದೆ, ಟಿಪ್ಪು ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು.