ಮೈಸೂರಿನಲ್ಲಿ ಈದ್ ಮಿಲಾದ್ ಸಂಭ್ರಮ: ಪೊಲೀಸ್ ಭದ್ರತೆಯಲ್ಲಿ ನಡೆದ ಬೃಹತ್ ಮೆರವಣಿಗೆ - ಮಿಲಾದ್ ಪಾರ್ಕ್
ಈದ್ ಮಿಲಾದ್ ಅಂಗವಾಗಿ ವಿವಿಧ ಮುಸ್ಲಿಂ ಸಂಘಟನೆಗಳು ಪೊಲೀಸರ ಸರ್ಪಗಾವಲಿನಲ್ಲಿ ಬೃಹತ್ ಮೆರವಣಿಗೆ ನಡೆಸಿದವು. ಅಶೋಕ ರಸ್ತೆಯಲ್ಲಿರುವ ಮಿಲಾದ್ ಪಾರ್ಕ್ನಿಂದ ಹೊರಟ ಮೆರವಣಿಗೆ ಮಿಷನ್ ಆಸ್ಪತ್ರೆಯ ಬಳಿ ಸಾಗಿ ಅಲ್ಲಿಂದ ತಿಲಕ್ ನಗರದ ಸಮೀಪವಿರುವ ಮಸೀದಿ ತಲುಪಿತು. ಬಳಿಕ ಮತ್ತೆ ಅಶೋಕ ರಸ್ತೆಯನ್ನು ಸಂಧಿಸಿ ಮಿಲಾದ್ ಪಾರ್ಕ್‌ನಲ್ಲಿ ಸಮಾಪನಗೊಂಡಿತು. ಮುನ್ನೆಚ್ಚರಿಕಾ ಕ್ರಮವಾಗಿ 500 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.