ಗಣಿನಾಡಿನಲ್ಲಿ ಈದ್-ಮಿಲಾದ್ ಸಂಭ್ರಮ, ವಿಡಿಯೋ - ಬಳ್ಳಾರಿ ಈದ್ ಮಿಲಾದ್ ಸುದ್ದಿ
ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ನಲ್ಲಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯ್ತು. ಮಕ್ಕಳು, ಯುವಕರು ಹಾಗೂ ವಯಸ್ಕರು ಸೇರಿದಂತೆ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಆಚರಿಸಿದರು. ಕೌಲ್ ಬಜಾರ್ನಲ್ಲಿ ಇರುವ ಕುನುಟಾನಿ ಮಸೀದಿಯಿಂದ ದೀವಾನೆ ಮಸ್ತಾನವಲಿ ದರ್ಗಾದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದರು.