ಈದ್ ಮಿಲಾದ್: ಮುಸ್ಲಿಂ ಬಾಂಧವರಿಗೆ ಹಣ್ಣು-ಹಂಪಲು ನೀಡಿ ಸತ್ಕರಿಸಿದ ಹಿಂದು ಯುವಕರು! - ಹಿಂದೂ ಮುಸ್ಲಿಂ ಭಾವೈಕ್ಯತೆ
ಗಂಗಾವತಿ: ಈದ್ ಮಿಲಾದ್ ಅಂಗವಾಗಿ ಇಂದು ನಗರದಲ್ಲಿ ಮುಸ್ಲಿಂ ಸಮುದಾಯದವರು ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಇದಕ್ಕೆ ಹಿಂದುಪುರ ಸಂಘಟನೆ ಯುವಕರು ಸಾಥ್ ನೀಡುವ ಮೂಲಕ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು. ನಗರದ ಕಲ್ಮಠದ ಸಮೀಪ, ಬಸವಣ್ಣ ವೃತ್ತದಲ್ಲಿ ಬಿಜೆಪಿ, ಆರ್ಎಸ್ಎಸ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಣ್ಣು ನೀಡಿ ಸತ್ಕರಿಸಿ ಸಾಮರಸ್ಯ ಕಾಪಾಡುವತ್ತ ಹೆಜ್ಜೆ ಹಾಕಿ ಗಮನ ಸೆಳೆದರು.