ಮದ್ಯಪ್ರಿಯರಿಗೆ ಮತ್ತೆ ನಿರಾಸೆ....ಮದ್ಯದಂಗಡಿ ಮಾಲೀಕರ ಈ ಪ್ರಯತ್ನವೂ ಈಗ ವ್ಯರ್ಥ - liquor store
ಮದ್ಯಪ್ರಿಯರ ಒತ್ತಾಯಕ್ಕೆ ಮಣಿದು ನಿಗದಿತ ಸಮಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ನಗರದ ಎಂಎಸ್ಐಎಲ್ ಬಳಿ ಸಾಮಾಜಿಕ ಅಂತರದ ನಿಟ್ಟಿನಲ್ಲಿ ಸದ್ದಿಲ್ಲದೇ ಮದ್ಯದ ಅಂಗಡಿ ಮುಂದೆ ಮರದ ಬ್ಯಾರಿಕೇಡ್ ಹಾಕಿ ತಯಾರಿ ನಡೆಸಿತ್ತು. ಎಂಎಸ್ಐಎಲ್ಗಳ ಮುಂದೆ ಬ್ಯಾರಿಕೇಡ್ ನಿರ್ಮಾಣ ಮಾಡಿ ಮದ್ಯ ಖರೀದಿಗೆ ನೂಕು ನುಗ್ಗಲು ಆಗದಂತೆ ಕ್ರಮ ವಹಿಸಲು ಮುಂದಾಗಿತ್ತು. ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಲು ರಾಜ್ಯ ಸರಕಾರ ಚಿಂತನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೂಡಾ ಇಂದು ಪ್ರಧಾನಿ ಭಾಷಣ ಅಬಕಾರಿ ಇಲಾಖೆಗೆ ಮತ್ತು ಅಂಗಡಿ ಮಾಲೀಕರಿಗೆ, ಮದ್ಯ ಪ್ರಿಯರಿಗೆ ನಿರಾಸೆಯನ್ನುಂಟು ಮಾಡಿದೆ.