ಕರ್ನಾಟಕ

karnataka

ETV Bharat / videos

ಸೋರುತ್ತಿದ್ದ ಶಾಲೆಗೆ ಕೊನೆಗೂ ಸಿಗ್ತಿದೆ ದುರಸ್ತಿ ಭಾಗ್ಯ: ಇದು ಈಟಿವಿ ಭಾರತ ವರದಿ ಫಲಶ್ರುತಿ - ಬಿಎಚ್ ಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ವಿಚಾರ

By

Published : Jan 25, 2020, 6:31 PM IST

ತುಮಕೂರು: ನಗರದ ಹೊರವಲಯದಲ್ಲಿರುವ ಬಿ.ಎಚ್.ಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಹೆಂಚುಗಳು ಒಡೆದು ಹೋಗಿದ್ದರಿಂದ ಶಾಲೆಯ ಶಿಕ್ಷಕರು ಮಳೆನೀರು ಒಳಬಾರದಂತೆ ಪ್ಲಾಸ್ಟಿಕ್ ಕವರನ್ನು ಹಾಕಿದ್ದರು. ಈ ಕುರಿತಂತೆ 'ಈಟಿವಿ ಭಾರತ್​' 'ಸೋರುತಿದೆ ಜ್ಞಾನ ದೇಗುಲ... ಅಧಿಕಾರಿಗಳ ನಿರ್ಲಕ್ಷ್ಯದಿಂದ' ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್, ಶಾಲೆಯನ್ನು ದುರಸ್ತಿಪಡಿಸಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details