ಪರೀಕ್ಷೆಗೆ ಹೇಗೆ ರೆಡಿಯಾಗಬೇಕು?: ಎಜುಕೇಷನ್ ಮಿನಿಸ್ಟರ್ ಕೊಟ್ರು ಈ ಟಿಪ್ಸ್...
ಪರೀಕ್ಷೆ ಈ ಪದ ಕೇಳಿದರೆ ಇಂದಿಗೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಭಯ ಪಡುವುದು ಸಹಜ. ಅಂದ ಹಾಗೇ, ಮಾರ್ಚ್ 4 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆ ಅಂದ್ಮೇಲೆ ತಯಾರಿ ಅಗತ್ಯ.. ಹೀಗಾಗಿ ಈಟಿವಿ ಭಾರತದೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಂಬಂಧ ಒಂದಷ್ಟು ಕಿವಿ ಮಾತು ಹೇಳಿದ್ದಾರೆ. ಪರೀಕ್ಷೆ ತಯಾರಿ ಹೇಗೆ ಇರಬೇಕು? ಯಾವ ರೀತಿ ಉತ್ತರ ಬರೆಯಬೇಕು? ಪರೀಕ್ಷಾ ಕೊಠಡಿಯೊಳಗೆ ಬಂದ ಕೂಡಲೇ ಏನು ಮಾಡಬೇಕು? ಪರೀಕ್ಷೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡಿದ್ದಾರೆ.