ಪುಟ್ಟೇನಹಳ್ಳಿಯಲ್ಲಿ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪ!
ಸಿಲಿಕಾನ್ ಸಿಟಿಯಲ್ಲಿ ಮೈದಳೆದಿರುವ ತೆಂಗಿನಕಾಯಿ ಗಣಪನನ್ನು ನೋಡೋದೇ ಕಣ್ಣಿಗೆ ಹಬ್ಬ. ನಗರದ ಪುಟ್ಟೇನಹಳ್ಳಿ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಬೃಹತ್ ಗಣಪ ತೆಂಗಿನಕಾಯಿ ರೂಪದಲ್ಲಿ ಮೈದಳೆದು ನಿಂತಿದ್ದಾನೆ. 12,000 ತೆಂಗಿನಕಾಯಿಗಳನ್ನು ಬಳಸಿ, 30 ಅಡಿ ಎತ್ತರದ ಗಣಪನನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ 3 ಸಾವಿರ ಎಳನೀರನ್ನೂ ಬಳಸಲಾಗುತ್ತಿದೆ. ಕಳೆದ 21 ದಿನಗಳಿಂದ ಸುಮಾರು 50 ಮಂದಿ ಕೆಲಸಗಾರರು ಗಣಪನನ್ನು ನಿರ್ಮಿಸಲು ಶ್ರಮ ಪಡುತ್ತಿದ್ದಾರೆ.