ಅಪರಾಧಗಳ ಪತ್ತೆಗೆ ಬಂದ ಸುಬಾಹು... ಇ-ಬೀಟ್ ಆ್ಯಪ್ ಮೂಲಕ ಕೊಡಗು ಪೊಲೀಸರ ಹೊಸ ಪ್ರಯತ್ನ - ಕೊಡಗು ಪೊಲೀಸ್
ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಿದರೂ ಅವುಗಳಿಂದ ನಿರೀಕ್ಷಿತ ಯಶಸ್ಸು ಸಾಧಿಸುವುದು ಕಷ್ಟಸಾಧ್ಯ. ಇತ್ತೀಚೆಗೆ ಬೀಟ್ ಪೊಲೀಸ್ ವ್ಯವಸ್ಥೆಗೆ ಪೂರಕವಾಗಿ ಸುಬಾಹು ಹೆಸರಿನ ಕ್ಯೂ ಆರ್ ಕೋಡ್ ಸ್ಕ್ಯಾನರ್ ವ್ಯವಸ್ಥೆಯ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಕಾಲ ಬದಲಾದಂತೆ ಪೊಲೀಸ್ ಇಲಾಖೆಯೂ ತಂತ್ರಜ್ಞಾನ ಹಾಗೂ ಜನಸ್ನೇಹಿ ಆಡಳಿತದ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಹತ್ತಿರವಾಗುತ್ತಿದೆ. ಇದಕ್ಕೆ ಪೂರಕವಾಗಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸುಬಾಹು ಇ-ಬೀಟ್ ವ್ಯವಸ್ಥೆ ಉತ್ತಮವಾಗಿದೆ.