ಚೆಲ್ಲಿದರೂ ಮಲ್ಲಿಗೆಯಾ.. ಗುಮಗೇರಾ ಸಾಹಿತ್ಯ ಸಮ್ಮೇಳನದಲ್ಲಿ ಹಾಡು ಹಾಡಿ ರಂಜಿಸಿದ ಡಿವೈಎಸ್ಪಿ - 12ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕುಷ್ಟಗಿ ತಾಲೂಕಿನ ಗುಮಗೇರಾದಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅವರು ಜನಪದ ಹಾಡು ಹೇಳಿ ಜನರನ್ನು ರಂಜಿಸಿದರು. ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರ ಕೋರಿಕೆ ಮೇರೆಗೆ ಡಿವೈಎಸ್ಪಿ ಉಜ್ಜನಕೊಪ್ಪ ಅವರು, ಚೆಲ್ಲಿದರೂ ಮಲ್ಲಿಗೆಯಾ.. ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.