ದಸರಾದಲ್ಲಿ ಕಲಾಸಕ್ತರನ್ನು ಕೈ ಬೀಸಿ ಕರೆದ ಚಿತ್ರಸಂತೆ..ನೀವೂ ನೋಡಿ ಖುಷಿ ಪಡಿ - ART Faie
ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಕೋರ್ಟ್ ರಸ್ತೆಯಲ್ಲಿ ಆಯೋಜಿಸಿದ್ದ ಚಿತ್ರಸಂತೆ ಹಾಗೂ ಹಸಿರು ಸಂತೆ ಕಲಾ ಪ್ರೇಮಿಗಳನ್ನು ಆಕರ್ಷಿಸಿತು. ಕಲಾಸಕ್ತರು ಮಳಿಗೆಯಲ್ಲಿದ್ದ ಕಲಾಕೃತಿಗಳನ್ನು ಖರೀದಿಸಿದರೆ, ಇನ್ನೂ ಕೆಲವರು ಸ್ಥಳದಲ್ಲೇ ಬಿಡಿಸಿದ ಚಿತ್ರಗಳನ್ನು ಕೊಂಡುಕೊಂಡರು. ತ್ರಿಡಿ, ಪ್ರಕೃತಿ, ಪಾರಂಪರಿಕ ಕಟ್ಟಡ, ಅರಮನೆ, ಆನೆಯ ಜಂಬೂಸವಾರಿ ಚಿತ್ರಗಳು ಗಮನ ಸೆಳೆದವು. ಮುಖ್ಯವಾಗಿ ಮಹಾತ್ಮಗಾಂಧಿ 150ನೇ ಜನ್ಮದಿನ ಅಂಗವಾಗಿ ವ್ಯಕ್ತಿಯೊಬ್ಬರು ಗಾಂಧಿ ವೇಷಧಾರಿಯಾಗಿ ಕಲಾಸಂತೆಯಲ್ಲಿ ಗಾಂಧಿಯ ತತ್ವ್ತ, ಮೌಲ್ಯಗಳ ಕುರಿತು ಸಂದೇಶ ಸಾರುತ್ತಿದ್ದರು.