ಅದ್ಧೂರಿಯಾಗಿ ನೆರವೇರಿದ ದುರ್ಗಾಂಬ ದೇವಿ ಜಾತ್ರೆ: ಹರಿದು ಬಂದ ಭಕ್ತಸಾಗರ - ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ದುರ್ಗಾಂಬ ದೇವಿ ಜಾತ್ರೆ
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಭಕ್ತಿ ಭಾವದಿಂದ ಅಂತರಗಟ್ಟೆ ದುರ್ಗಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರ ದಂಡು ಜಾತ್ರಾ ಮಹೋತ್ಸವಕ್ಕೆ ಹರಿದು ಬರುತ್ತಿದೆ. ಇಂದು ನಡೆದ ರಥೋತ್ಸವ ಕಾರ್ಯಕ್ರಮದ ವೇಳೆ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು. ದುರ್ಗೆಯ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ಎತ್ತಿನಗಾಡಿಯ ಮೂಲಕವೇ ಜಾತ್ರೆಗೆ ಬರೋದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಜಾತ್ರೆಗೆ ಎರಡು ಸಾವಿರಕ್ಕೂ ಅಧಿಕ ಎತ್ತಿನ ಗಾಡಿಗಳು ಬಂದಿದ್ದು ವಿಶೇಷವಾಗಿತ್ತು.