ಹುಬ್ಬಳ್ಳಿಯಲ್ಲಿ ಕುಂಭ ಮೇಳದೊಂದಿಗೆ ಶ್ರೀ ದುರ್ಗಾದೇವಿಯ ಪಾಲಿಕೆ ಉತ್ಸವ - ಇತ್ತೀಚಿನ ಹುಬ್ಬಳ್ಳಿ ಸುದ್ದಿ
ದಸರಾ ಮಹೋತ್ಸವ, ನವರಾತ್ರಿ ನಿಮಿತ್ತ ಹುಬ್ಬಳ್ಳಿಯ ತೋರವಿ ಹಕ್ಕಲದ ಶ್ರೀ ದುರ್ಗಾದೇವಿ ದೇವಸ್ಥಾನದ ವತಿಯಿಂದ ಹೊಸೂರಿನ ಗಾಳಿ ದುರ್ಗಮ್ಮ ದೇವಿ ದೇವಸ್ಥಾನದಿಂದ ತೋರವಿ ಹಕ್ಕಲದ ದೇವಿಯ ಗುಡಿಯವರೆಗೆ ಪಾಲಿಕೆ ಉತ್ಸವ ನಡೆಯಿತು. ಈ ವೇಳೆ 125 ಜನ ಮಹಿಳೆಯರು ಕುಂಭ ಹೊತ್ತು ಸಾಗಿದ್ದು ವಿಶೇಷವಾಗಿತ್ತು. 61 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಶ್ರೀ ದುರ್ಗಾದೇವಿಯ ಮೂರ್ತಿಗೆ ಬಣ್ಣ ಕೊಡಿಸಿ ಪ್ರತಿಷ್ಠಾಪನೆ ಮಾಡಲಾಗುವುದು. ಅದರಂತೆ ಹೊಸೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕುಂಭ ಮೇಳದೊಂದಿಗೆ ಪಾಲಿಕೆ ಉತ್ಸವ ನಡೆಸಲಾಯಿತು. ನಗರದ ಚೆನ್ನಮ್ಮ ವೃತ್ತ, ಚಂದ್ರಕಲಾ ಟಾಕೀಸ್, ಗಣೇಶ ಪೇಟೆ, ದುರ್ಗದ ಬೈಲ್ ಮೂಲಕ ತೋರವಿ ಹಕ್ಕಲದ ದೇವಿಯ ಗುಡಿವರೆಗೂ ಮೆರಣಿಗೆ ನಡೆಸಲಾಯಿತು.