ಕೇಂದ್ರದ ವಿರುದ್ದ ರೈತರದ್ದು ತಿಳಿವಳಿಕೆ ಇಲ್ಲದ ಪ್ರತಿಭಟನೆ: ದುಂಡಪ್ಪ ಬೆಂಡಿವಾಡೆ - belgavi news
ಚಿಕ್ಕೋಡಿ: ಕೇಂದ್ರ ಸರಕಾರದ ವಿರುದ್ದ ರೈತರು ತಿಳಿವಳಿಕೆ ಇಲ್ಲದೇ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆ ವಿರುದ್ದ ಬಿಜೆಪಿ ರೈತ ಮೋರ್ಚಾದ ಉಪಾದ್ಯಕ್ಷ ದುಂಡಪ್ಪ ಬೆಂಡಿವಾಡೆ ಕಿಡಿ ಕಾರಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮಸೂದೆ ಬಗ್ಗೆ ರೈತರಿಗೆ ವಿರೋಧ ಪಕ್ಷಗಳು ತಪ್ಪು ಕಲ್ಪನೆ ನೀಡುತ್ತಿವೆ. ರೈತರಿಗೆ ತಿಳಿವಳಿಕೆ ಇಲ್ಲದೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.