ಹವಾಮಾನ ವೈಪರೀತ್ಯ, ದಲ್ಲಾಳಿಗಳ ಹಾವಳಿ: ಮಾವಿನ ಮರಗಳಿಗೆ ಕೊಡಲಿ ಹಾಕಿದ ಬೆಳೆಗಾರ! - brokers intervention
ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಮಾವಿನಹಣ್ಣು ಬೆಳೆಯುವ ತಾಲೂಕುಗಳಲ್ಲಿ ಜಿಲ್ಲೆಯ ಹಾನಗಲ್ ತಾಲೂಕು ಕೂಡ ಒಂದು. ತಾಲೂಕಿನ ರೈತರ ಪಾಲಿಗೆ ಇಷ್ಟುದಿನ ಸಿಹಿಯಾಗಿದ್ದ ಮಾವಿನ ಬೆಳೆ, ಇದೀಗ ಹುಳಿಯಾಗಲಾರಂಭಿಸಿದೆ. ಹವಾಮಾನ ವೈಪರೀತ್ಯ, ದಲ್ಲಾಳಿಗಳ ಹಾವಳಿ, ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಮಾವು ಬೆಳೆಗಾರರನ್ನ ಚಿಂತೆಗೀಡು ಮಾಡಿದೆ. ಮಾವಿನ ಮರಗಳನ್ನು ಕತ್ತರಿಸಿ ಬೇರೆ ಬೆಳೆಯಲು ಮುಂದಾಗಿದ್ದಾರೆ. ಅವರ ನೋವಿನ ಕಥೆ ಇಲ್ಲಿದೆ.