ದಲಿತ ಯುವಕನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ದೂರು - ಧಾರವಾಡದ ಕಲಘಟಗಿ ಅರಣ್ಯ ವ್ಯಾಪ್ತಿ
ದಲಿತ ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಎಸ್ಪಿ ಕಚೇರಿ ಎದುರು ದಲಿತ ಸಂಘಟನೆಯವರು ಪ್ರತಿಭಟನೆ ನಡೆಸಿದರು. ಧಾರವಾಡದ ಕಲಘಟಗಿ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ನಾಡ ಪಿಸ್ತೂಲ್ ವಶಪಡಿಸಿಕೊಂಡಿದ್ದು, ಆರೋಪಿತನಲ್ಲದ ಡೇವಿಡ್ ಎನ್ನುವ ವ್ಯಕ್ತಿಯನ್ನ ಬಂಧಿಸಿ ವಿನಾ ಕಾರಣ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಮನ ಬಂದಂತೆ ಥಳಿಸಿದ್ದು, ಇದಕ್ಕೆ ನೇರವಾಗಿ ಇನ್ಸ್ಪೆಕ್ಟರ್ ಪ್ರಭು ಸೂರಿನ ಅವರೇ ಕಾರಣ. ಹೀಗಾಗಿ ಅವರನ್ನ ತಕ್ಷಣ ವಜಾ ಮಾಡಿ ನಿರಪರಾಧಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಎಸ್ಪಿ ಕೃಷ್ಣಕಾಂತ್ ಅವರಿಗೆ ಮನವಿ ಸಲ್ಲಿಸಿದರು.