ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದ ಕುಡುಕನಿಂದ ಪೊಲೀಸ್ ಜೀಪ್ ಕೆಳಗೆ ಮಲಗಿ ರಂಪಾಟ.. - drunkard kirik in police station
ಕುಡಿದ ಅಮಲಿನಲ್ಲಿ ವೈದ್ಯರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಭೂಪ ಇದೀಗ ಮತ್ತೆ ಪೊಲೀಸ್ ಜೀಪ್ ಕೆಳಗೆ ಮಲಗಿ ಮತ್ತೊಂದು ರಂಪಾಟ ಮಾಡಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಬೇಡಕಿಹಾಳ ಗ್ರಾಮದ ಸಂಜಯ ಬನವಾನಿ ಎಂಬ ಕುಡುಕನಿಂದ ಹಲ್ಲೆಗೊಳಗಾದ ವೈದ್ಯರು, ಆತನ ವಿರುದ್ಧ ದೂರು ನೀಡಲು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಪೊಲೀಸ್ ಠಾಣೆಗೆ ಬಂದಿದ್ದರು. ಆಗ ಠಾಣೆ ಮುಂದೆ ಆರೋಪಿ ಸಂಜಯ್ ಪೊಲೀಸರ ಜೀಪ್ ಮುಂದೆ ಮಲಗಿ ತನ್ನ ಮೇಲೆ ಹತ್ತಿಸಿ ಅಂತಾ ರಂಪಾಟ ನಡೆಸಿದ್ದ. ಈತನ ವಿರುದ್ಧ ಐಪಿಸಿ 353, 504, 506 ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.