ಕೊರೊನಾ ಕರ್ಫ್ಯೂ ಚಿತ್ರಣ ಡ್ರೋನ್ ಕಣ್ಣಲ್ಲಿ ಸೆರೆ - ಡ್ರೋಣ್ ಚಿತ್ರಣ
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಜನತಾ ಕರ್ಫ್ಯೂಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಖಾಲಿಯಾದ ರಸ್ತೆಗಳ ಚಿತ್ರಣ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ. ಕೋವಿಡ್ ಎರಡನೇ ಅಲೆ ಮಹಾಮಾರಿಯಿಂದ ರಾಜ್ಯ ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಹೀಗಾಗಿ ಜನರು ಯಾರೂ ಮನೆಯಿಂದ ಹೊರ ಬಾರದೇ ರಸ್ತೆಗಳು ಬಿಕೋ ಎನ್ನುತ್ತಿವೆ. ನಗರದ ವಿವಿ ರೋಡ್, ಆರ್‌ಪಿ ರೋಡ್ ಹಾಗೂ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಜನರ ಓಡಾಟ ಸಂಪೂರ್ಣ ಸ್ತಬ್ಧವಾಗಿರುವ ಚಿತ್ರಣದ ಮಂಡ್ಯದ ರಸ್ತೆಗಳ ವೈಮಾನಿಕ ನೋಟ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ.