ಬಾದಾಮಿಯಲ್ಲೂ ಕೊರೊನಾ ಕೇಕೆ; ಹೊರ ಕಾಲಿಡುವವರನ್ನು ಗಮನಿಸುತ್ತೆ ಡ್ರೋಣ್! - ಡ್ರೋಣ್ ನೋಟ
ಕೊರೊನಾ ಸೋಂಕು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೂ ಹರಡಿದ ಪರಿಣಾಮ ಆತಂಕ ಮೂಡಿಸಿದೆ. ಬಾದಾಮಿಗೆ ಯಾವುದೇ ಸೋಂಕು ತಗುಲದೆ ಆರಾಮವಾಗಿದ್ದ ಜನತೆ ಈಗ ಗರ್ಭಿಣಿಯಿಂದ ಒಟ್ಟು 12 ಜನರಿಗೆ ಹಾಗೂ ಇನ್ನೋರ್ವ ಯುವತಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು 13 ಜನರಿಗೆ ತಾಲೂಕಿನಲ್ಲಿ ಕೊರೊನಾ ವಕ್ಕರಿಸಿದೆ. ಇದರಿಂದ ಜಿಲ್ಲೆಯ ನಾಲ್ಕು ತಾಲೂಕಿಗೆ ಸೋಂಕು ಹರಡಿದಂತಾಗಿದೆ. ಬಾದಾಮಿ ಮತಕ್ಷೇತ್ರವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರವಾಗಿರುವುದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸೋಂಕು ಹರಡಿರುವ ಹಿನ್ನೆಲೆ ಬಾದಾಮಿ ಪಟ್ಟಣದ ಚಾಲುಕ್ಯ ನಗರ ಹಾಗೂ ಢಾಣಕಶಿರೂರು ಗ್ರಾಮವನ್ನೀಗ ಸಂಪೂರ್ಣ ನಿಷೇಧಿತ ಪ್ರದೇಶವಾಗಿ ಸೀಲ್ ಡೌನ್ ಮಾಡಲಾಗಿದೆ. ಬಾದಾಮಿ ಪಟ್ಟಣವು ಡ್ರೋಣ್ ಕ್ಯಾಮರ್ ಮೂಲಕ ಸೆರೆ ಹಿಡಿಯಲಾಗಿದ್ದು, ಈ ಮೂಲಕ ಸೀಲ್ಡೌನ್ ಪ್ರದೇಶದಲ್ಲಿ ಸಂಚಾರ ಮಾಡುತ್ತಿರುವವರ ಬಗ್ಗೆ ನಿಗಾ ಇಡಲಾಗುತ್ತಿದೆ.