ರಂಜಾನ್ ವೇಳೆ ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ಗದಗ ಎಸ್ಪಿ
ಗದಗ : ನಗರದ ರಂಗನವಾಡಿ ಪ್ರದೇಶದಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ನಿಗಾ ವಹಿಸಲು ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ. ಇಲ್ಲಿನ ನಿವಾಸಿ ಪಿ-166 ಎಂಬ 60 ವರ್ಷದ ವೃದ್ದೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅವರ ಗೆಳತಿ 59 ವರ್ಷದ ಪಿ-304 ಎಂಬುವರಿಗೂ ಸೋಂಕು ದೃಢಪಟ್ಟಿದೆ. ಅದೇ ಗಲ್ಲಿಯ ಎರಡನೇ ಕಾಂಟಾಕ್ಟ್ 42 ವರ್ಷದ ವ್ಯಕ್ತಿ ಪಿ-370 ಗು ಸಹ ಕೊರೊನಾ ದೃಢಪಟ್ಟಿದೆ. ಬೇರೆ ಕಡೆಯಿಂದ ಈ ಪ್ರದೇಶಕ್ಕೆ ಯಾರು ಬರದಂತೆ ಪೊಲೀಸರು ಸರ್ಪಗಾವಲು ನಿರ್ಮಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಇಲ್ಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸುತ್ತಿದೆ. 200 ಕ್ಕೂ ಹೆಚ್ಚು ಜನರಿಗೆ ಹಾಸ್ಟೆಲ್ನಲ್ಲಿ ಸುರಕ್ಷಿತವಾಗಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಎಲ್ಲ ಮನೆಗಳಿಗೆ ರಾಸಾಯನಿಕ ಸಿಂಪಡಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಇನ್ನೂ ರಂಜಾನ್ ವೇಳೆ ಮುಸ್ಲಿಂ ಬಾಂಧವರು ಸರ್ಕಾರದ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಸ್ಪಿ ಯತೀಶ್.ಎನ್ ಎಚ್ಚರಿಕೆ ನೀಡಿದ್ದಾರೆ.