
ವಿದ್ಯಾರ್ಥಿಗಳಿಗೆ ಚಾಲನಾ ತರಬೇತಿ.. ಸ್ವಾವಲಂಬನೆ ಪಾಠ ಕಲಿಸುತ್ತಿದೆ ಸಿದ್ಧಗಂಗಾ ಮಠ - tumakuru siddaganga mata
ತುಮಕೂರು : ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳು ‘ಗಳಿಕೆಯೊಂದಿಗೆ ಕಲಿಕೆ’ ಮಾಡಲಿ ಎಂಬ ಉದ್ದೇಶದಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಚಾಲನಾ ತರಬೇತಿ ನೀಡಲಾಗುತ್ತಿದೆ.