ದಾವಣಗೆರೆಯಲ್ಲೂ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ.. ವ್ಯಾಕ್ಸಿನ್ ಪಡೆದವರು ಏನಂದ್ರು ನೀವೇ ನೋಡಿ - Drive to corona vaccination in Davanagere
ದಾವಣಗೆರೆ: ಇಂದು ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಸಕರಾದ ಎಸ್.ಎಸ್.ರವೀಂದ್ರನಾಥ್, ಲಿಂಗಣ್ಣ ಜಂಟಿಯಾಗಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು. 19,070 ಜನ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆಯಲ್ಲಿ ಮೊದಲಿಗೆ ಜಿಲ್ಲಾಸ್ಪತ್ರೆ ಡಿ ಗ್ರೂಪ್ ನೌಕರ ರಾಜಾಭಕ್ಷಿ ಅವರು ಲಸಿಕೆ ತೆಗೆದುಕೊಂಡರು. ಬಳಿಕ ಎರಡನೇಯದಾಗಿ ಇದೇ ಆಸ್ಪತ್ರೆಯ ವೈದ್ಯರಾದ ಶಶಿಧರ್, ಯತೀಶ್ ಲಸಿಕೆ ತೆಗೆದುಕೊಂಡರು.