ಹೆಲ್ಮೆಟ್ ಬಳಸಿ ಸಂಚರಿಸಿ: ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು - ಹೆಲ್ಮೆಟ್ ರಹಿತ ಸಂಚಾರ ಅಪಘಾತಕ್ಕೆ ಆಹ್ವಾನ
ಹುಬ್ಬಳ್ಳಿ: ಹೆಲ್ಮೆಟ್ ರಹಿತ ಸಂಚಾರ ಅಪಘಾತಕ್ಕೆ ಆಹ್ವಾನ ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಾದ್ರೂ ಕೂಡ ಹೆಲ್ಮೆಟ್ ರಹಿತವಾಗಿ ಸಂಚರಿಸಬೇಡಿ ಎಂದು ಹುಬ್ಬಳ್ಳಿ ಸಂಸ್ಕಾರ ಸ್ಕೂಲ್ ಮಕ್ಕಳು ನಗರದ ಚೆನ್ನಮ್ಮ ವೃತ್ತ ಹಾಗೂ ಕೇಶ್ವಾಪುರ ವೃತ್ತದಲ್ಲಿ ಬೈಕ್ ಸವಾರರಿಗೆ ಗುಲಾಬಿ ಹೂ ಹಾಗೂ ಪೆನ್ ನೀಡುವ ಮೂಲಕ ಜನಜಾಗೃತಿ ಮೂಡಿಸಿದರು. ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಹೆಲ್ಮೆಟ್ ಬಳಕೆ ಹಾಗೂ ಸೀಟ್ ಬೆಲ್ಟ್ ಕಡ್ಡಾಯವಾಗಿ ಉಪಯೋಗಿಸಬೇಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ರು. ಹುಬ್ಬಳ್ಳಿ ಚೆನ್ನಮ್ಮವೃತ್ತ, ಕೇಶ್ವಾಪುರ ಹಾಗೂ ವಿವಿಧ ನಗರದಲ್ಲಿ ಜಾಗೃತಿ ಮೂಡಿಸಿದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.