ಭಯೋತ್ಪಾದನೆ ಹುಟ್ಟಡಗಿಸಲು ಎಲ್ಲ ದೇಶಗಳು ಒಗ್ಗೂಡಬೇಕು: ಚಿತ್ರ ಬಿಡಿಸುವ ಮೂಲಕ ಕಲಾವಿದನ ಮನವಿ
ಭಯೋತ್ಪಾದನೆ ಹೊಡೆದೋಡಿಸಲು ಜಾಗತಿಕ ಮಟ್ಟದಲ್ಲಿ ವಿಶ್ವದ ಎಲ್ಲಾ ದೇಶಗಳು ಒಂದಾಗಬೇಕು. ದ್ವೀಪ ರಾಷ್ಟ್ರದ ಮೇಲೆ ನಡೆದ ಮಾನವೀಯತೆಯ ಕಗ್ಗೊಲೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಗಣಿನಾಡಿನ ಚಿತ್ರ ಕಲಾವಿದ ಎಂ.ಡಿ.ರಫೀಕ್ ಚಿತ್ರ ಬಿಡಿಸುವ ಮೂಲಕ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು. ಈಟಿವಿ ಭಾರತ್ ಜೊತೆ ಮಾತನಾಡಿ, ಕ್ಯಾನ್ಸರ್ನಂತೆ ಬೆಳೆಯುತ್ತಿರುವ ಭಯೋತ್ಪಾದನೆಯನ್ನು ಹೇಗೆ ಮಟ್ಟ ಹಾಕಬೇಕು, ಹಾಗೇ ಭಯೋತ್ಪಾದನಾ ಕೃತ್ಯದಿಂದಾಗುವ ಹಾನಿ ಏನೇನು ಎಂಬುದನ್ನು ಚಿತ್ರ ಬಿಡಿಸುವ ಮೂಲಕ ತೋರಿಸಿದರು.