ರಾಜ್ಯದ ರೈತರನ್ನು ಸದ್ದಿಲ್ಲದೆ ಸೆಳೆಯುತ್ತಿದೆ ಡ್ರ್ಯಾಗನ್ ಫ್ರೂಟ್ ಬೆಳೆ - Tumkur dragon Fruit
ತುಮಕೂರು: ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವ ಡ್ರ್ಯಾಗನ್ ಫ್ರೂಟ್ ಬೆಳೆಯಲು ರೈತರು ನಿಧಾನವಾಗಿ ಸದ್ದಿಲ್ಲದೆ ಆಸಕ್ತಿ ವಹಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 500 ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ನ್ನು ರೈತರು ಬೆಳೆದಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು 1.5 ಟನ್ ಹಣ್ಣನ್ನು ಬೆಳೆಯಬಹುದಾಗಿದ್ದು, 1.50 ಲಕ್ಷ ರೂ. ಆದಾಯವನ್ನು ಪಡೆಯಬಹುದಾಗಿದೆ ಎಂದು ಕೇಂದ್ರೀಯ ತೋಟಗಾರಿಕಾ ಪ್ರಾದೇಶಿಕ ಕೇಂದ್ರದ ಸಂಶೋಧಕರು ತಿಳಿಸುತ್ತಾರೆ.