ಡಾ. ರಾಮರಾವ್ ಮಹಾರಾಜ ವಾಕ್ ಸಿದ್ಧಿ ಪುರುಷರಾಗಿದ್ದರು : ಡಾ. ಉಮೇಶ ಜಾಧವ್ - Dr. Umesha Jadhav made condolence programme about dr, ramarav maharaj
ಮಹಾರಾಷ್ಟ್ರ ಪೌರಾದೇವಿ ಬಂಜಾರ ಜಗದ್ಗುರು ಪೀಠದ ಲಿಂಗೈಕ್ಯ ಡಾ. ರಾಮರಾವ್ ಮಹಾರಾಜರು ಬಂಜಾರರ ಸಂಸ್ಕೃತಿಯನ್ನು ದೇಶದಾದ್ಯಂತ ಗುರುತಿಸಿ ಬಂಜಾರ ಕುಲಕ್ಕೆ ಮಹಾನ್ ಕೊಡುಗೆ ನೀಡಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ್ ಸ್ಮರಿಸಿದರು. ಲಿಂಗೈಕ್ಯ ಡಾ. ರಾಮರಾವ್ ಮಹಾರಾಜರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಜ ವಾಕ್ ಸಿದ್ಧಿ ಪುರುಷರಾಗಿದ್ದರು. ಭಕ್ತರ ಮನಸ್ಸು ಅರಿತು ಬಡವ, ಶ್ರೀಮಂತ ಎನ್ನದೆ ಎಲ್ಲರನ್ನೂ ಸಮಾಜಮುಖಿ ಚಿಂತನೆಗಳತ್ತ ಕರೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ನೆನೆದರು.