ಬಿಎಸ್‌ವೈ ಮಾತಿನ ಮೇಲೆ ನಿಂತಿದ್ದಾರೆ.. ಗುರುವಾರ ಪ್ರಮಾಣ ವಚನಕ್ಕೆ ಅಧಿಕೃತ ಆಹ್ವಾನ ಬಂದಿದೆ.. ಡಾ. ಸುಧಾಕರ್ - ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಲೇಟೆಸ್ಟ್ ಸುದ್ದಿಗೋಷ್ಟಿ
ಜನರ ಆಶೀರ್ವಾದದಿಂದ ನನಗೆ ಸಚಿವ ಸ್ಥಾನ ಸಿಕ್ತಿದೆ. ಗುರುವಾರ ಪ್ರಮಾಣ ವಚನ ಸ್ವೀಕಾರಕ್ಕೆ ಬರಲು ಸಿಎಂ ಯಡಿಯೂರಪ್ಪ ಅಧಿಕೃತ ಆಹ್ವಾನ ನೀಡಿದ್ದಾರೆ. ಹೀಗಾಗಿ ಸಿಎಂಗೆ ಅಭಿನಂದಿಸುತ್ತಿದ್ದೇನೆ ಎಂದು ಶಾಸಕ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಯಡಿಯೂರಪ್ಪನವರು ಮಾತು ಕೊಟ್ಟಂಗೆ ನಡೆದಿದ್ದಾರೆ. ರಾಜಕೀಯ ವ್ಯಕ್ತಿಗಳಲ್ಲಿ ನುಡಿದಂತೆ ನಡೆದವರು ಯಡಿಯೂರಪ್ಪ ಮಾತ್ರ. ಆಂತರಿಕ ಸಮಸ್ಯೆ ಮತ್ತು ಒತ್ತಡ ಹೊರತಾಗಿಯೂ ಮಾತಿಗೆ ನಿಂತಿದ್ದಾರೆ ಎಂದರು.