ಕೊರೊನಾ ಭೀತಿ: ಭೇಟಿಗೆ ಬರುವವರಿಗಾಗಿ ಮನೆ ಮುಂದೆ ಸ್ಯಾನಿಟೈಸರ್ ಇಟ್ಟ ಸಚಿವ ಸುಧಾಕರ್ - ಮನೆ ಮುಂದೆ ಸ್ಯಾನಿಟೈಸರ್ ಇಟ್ಟ ಡಾ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಜೊತೆಗೆ ಕಲಬುರಗಿಯಲ್ಲಿ ಓರ್ವ ವೃದ್ಧ ಕೊರೊನಾ ಸೋಂಕಿಗೆ ಬಲಿಯಾದ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮನೆಯಲ್ಲಿ ಮುಂಜಾಗ್ರತೆ ವಹಿಸಿದ್ದಾರೆ. ಸಚಿವ ಸುಧಾಕರ್ ಅವರ ಸದಾಶಿವನಗರದ ಮನೆ ಮುಂದೆ ಸ್ಯಾನಿಟೈಸರ್ ಇಟ್ಟಿದ್ದು, ಭೇಟಿಗೆ ಬರುವ ಅಧಿಕಾರಿಗಳು, ಕಾರ್ಯಕರ್ತರು ಎಲ್ಲರೂ ಹ್ಯಾಂಡ್ ವಾಶ್ ಮಾಡಿಕೊಂಡೇ ಮನೆ ಒಳಗೆ ಬರಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ ಸ್ಯಾನಿಟೈಸರ್ ಕೈಗೆ ಹಾಕಲು ಓರ್ವ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಸದ್ಯ ಸಚಿವರ ಮನೆಗೆ ಬರುವ ಪ್ರತಿಯೊಬ್ಬರ ಕೈಗೆ ಸ್ಯಾನಿಟೈಸರ್ ಹಾಕಿ ಕಳಿಸ್ತಿದ್ದಾರೆ.