ಲಾಕ್ಡೌನ್ ಎಫೆಕ್ಟ್.. ರಕ್ತದ ಕೊರತೆಯಿಂದ ಬಳಲುತ್ತಿದೆ ಬ್ಲಡ್ ಬ್ಯಾಂಕ್.. - ಕೊಪ್ಪಳ ಬ್ಲಡ್ ಬ್ಯಾಂಕ್
ಕೊಪ್ಪಳ : ಕೊರೊನಾ ಭೀತಿ ಹಾಗೂ ಅದರ ಕರಿನೆರಳು ಎಲ್ಲ ಕ್ಷೇತ್ರದ ಮೇಲೂ ಬಿದ್ದಿದೆ. ಪ್ರತಿ ತಿಂಗಳೂ ಏನಿಲ್ಲವೆಂದರೂ 900 ರಿಂದ 1000 ಯೂನಿಟ್ ಬ್ಲಡ್ ಸಂಗ್ರಹಿಸುತ್ತಿದ್ದ ಕೊಪ್ಪಳದ ಬ್ಲಡ್ ಬ್ಯಾಂಕ್ಗೆ ಈಗ ರಕ್ತದ ಕೊರತೆ ಎದುರಾಗಿದೆ. ಬ್ಲಡ್ ಬ್ಯಾಂಕ್ ಮೇಲೆ ಆಗಿರುವ ಕೊರೊನಾ ಎಫೆಕ್ಟ್ ಕುರಿತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್‌ನ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ್ ಹ್ಯಾಟಿ ಅವರೊಂದಿಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ಚಿಟ್‌ಚಾಟ್ ನಡೆಸಿದ್ದಾರೆ.