ರೈತರ ನಿದ್ದೆಗೆಡಿಸಿದ ಡೌನಿ ರೋಗ : ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ - ಬೆಳಗಾವಿ ಜಿಲ್ಲೆ ಅಥಣಿ
ಕಳೆದ ಕೃಷ್ಣಾ ನದಿ ಪ್ರವಾಹದಿಂದ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ತತ್ತರಿಸಿ ಹೋಗಿದೆ. ಪರಿಣಾಮವಾಗಿ ತಾಲೂಕಿನಲ್ಲಿ ದ್ರಾಕ್ಷಿ ಬೆಳೆಗಾರರು ನಲುಗಿ ಹೋಗಿದ್ದಾರೆ. ಹವಮಾನ ವೈಫಲ್ಯ, ಮೋಡ ಕವಿದ ಹಾಗೂ ಶೀತ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ಡೌನಿ ರೋಗ ತಗುಲಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.