ಇದೇನು ಆಟದ ಮೈದಾನವೋ..? ಅಥವ ಕೆಸರು ಗದ್ದೆಯೋ... - ಅನೈತಿಕ ಚಟುವಟಿಕೆಯ ತಾಣ
ಮೂರು ಎಕರೆ ವಿಸ್ತೀರ್ಣ ಹೊಂದಿರುವ ಆಟದ ಮೈದಾನದಲ್ಲಿ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಮಳೆ ಬಂದರೆ ಸಾಕು ಮೈದಾನ ಕೆಸರು ಗದ್ದೆಯಂತಾಗುತ್ತದೆ. ಇದರ ಜೊತೆಗೆ ಜನರು ದನಗಳನ್ನು ಇಲ್ಲಿನ ಹಸಿರು ಮೇಯಲು ಬಿಡುತ್ತಾರೆ. ಇನ್ನು ಮೈದಾನದ ಸುತ್ತಮುತ್ತ ಎಣ್ಣೆ ಬಾಟಲಿಗಳು, ಗುಟ್ಕಾ ಕವರ್ಗಳೇ ಕಣ್ಣಿಗೆ ಬೀಳುತ್ತವೆ.