ಇಂದಿರಾ ಕ್ಯಾಂಟೀನ್ ಮುಚ್ಚಿದ್ರೆ ಬಡವರು ಎಲ್ಲಿ ಹೋಗ್ಬೇಕು: ಕ್ಯಾಂಟೀನ್ ಮುಚ್ಚದಂತೆ ಗ್ರಾಹಕರ ಆಗ್ರಹ - Bengalore Indira Canteen
ಬೆಂಗಳೂರು: 2017 ರಿಂದ ಇಲ್ಲಿಯವರೆಗೆ ಲಕ್ಷಾಂತರ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಕಡಿಮೆ ಹಣದಲ್ಲಿ ಊಟ, ತಿಂಡಿ ನೀಡಿರುವ ಇಂದಿರಾ ಕ್ಯಾಂಟೀನ್ ಈಗ ಸಂಕಷ್ಟದಲ್ಲಿದೆ. ಬಿಬಿಎಂಪಿ, ರಾಜ್ಯ ಸರ್ಕಾರ ಕ್ಯಾಂಟೀನ್ ನಿರ್ವಹಣೆಗೆ ಬೇಕಾದ ಸಬ್ಸಿಡಿ ಹಣ ಪಾವತಿ ಮಾಡದೇ ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರ್ತಿದೆ. ಗುತ್ತಿಗೆದಾರರು ಹಣವಿಲ್ಲದೇ, ನೀರಿನ ಬಿಲ್ ಕಟ್ಟದ ಕಾರಣ ಜಲಮಂಡಳಿಯೂ ಸೇವೆ ಸ್ಥಗಿತಗೊಳಿಸಿದೆ. ಕ್ಯಾಂಟೀನ್ ಊಟದ ಮೆನುವಿನಲ್ಲೂ ಇಳಿಕೆಯಾಗುತ್ತಿದೆ. ಆದ್ರೆ ಬಡಜನ, ಕೂಲಿ ಕಾರ್ಮಿಕರು ಊಟ - ತಿಂಡಿಗಾಗಿ ಇಂದಿರಾ ಕ್ಯಾಂಟೀನ್ನನ್ನೇ ನೆಚ್ಚಿಕೊಂಡಿದ್ದಾರೆ. ಊಟ ಚೆನ್ನಾಗಿ ಸಿಗುತ್ತಿದೆ, ಬಡವರಿಗೆ ಅನುಕೂಲ ಆಗ್ತಿದೆ. ಈ ಕ್ಯಾಂಟೀನ್ ಮುಚ್ಚಿದ್ರೆ ಬಡವರು ಎಲ್ಲಿ ಹೋಗ್ಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.