ಯುಗಾದಿ ಹಬ್ಬಕ್ಕೆ ಹೋಗಿ ತಮ್ಮ ಕುಟುಂಬಕ್ಕೆ ಕೊರೊನಾ ಅಂಟಿಸಬೇಡಿ: ಡಾಲಿ ಧನಂಜಯ್ ಮನವಿ - Ugadi festival
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಭೀತಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ರಾಜ್ಯ ಸರ್ಕಾರ ಇಡೀ ಕರ್ನಾಟಕವನ್ನು ಲಾಕ್ಡೌನ್ ಮಾಡಿದೆ. ಇನ್ನು ಯುಗಾದಿ ಹಬ್ಬದ ಪ್ರಯುಕ್ತ ಜನರು ಹೊರಗಡೆ ಓಡಾಡೋದು ಹಾಗೂ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ನಟ ಡಾಲಿ ಧನಂಜಯ್ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿರುವ ಜನತೆ ತಮ್ಮ ತಮ್ಮ ಊರು, ಹಳ್ಳಿಗಳಿಗೆ ಹೋಗಬೇಡಿ ಎಂದು ವಿನಂತಿ ಮಾಡಿದ್ದಾರೆ. ಕೊರೊನಾ ವೈರಸ್ ಕಾರಣ ನಾನು ಕೂಡ ಈ ವರ್ಷ ನನ್ನ ಊರಿಗೆ ಹೋಗ್ತಾ ಇಲ್ಲಾ. ನಮಗೆ ಕೊರೊನಾ ವೈರಸ್ ಇದ್ದಾಗ ನಾವು ನಮ್ಮ ಹಳ್ಳಿಗೆ ಹೋದರೆ ತಂದೆ, ತಾಯಿ, ತಾತ, ಅಜ್ಜಿಗೆ ಹರಡಬಹುದು. ಈ ಕಾರಣಕ್ಕೆ ಯಾರೂ ತಮ್ಮ ಊರುಗಳಿಗೆ ಹೋಗಬೇಡಿ ಎಂದು ಧನಂಜಯ್ ವಿನಂತಿ ಮಾಡಿದ್ದಾರೆ. ಹಾಗೇ ಸರ್ಕಾರ ಹಾಗೂ ವೈದ್ಯರು ಹೇಳುವ ಹಾಗೆ ನಮ್ಮ ನಾಗರಿಕರು ನಡೆದುಕೊಳ್ಳಿ ಎಂದು ಡಾಲಿ ಧನಂಜಯ್ ಜನರಲ್ಲಿ ಮನವಿ ಮಾಡಿದ್ದಾರೆ.