ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ಗೆ ಕ್ಯಾರೆ ಅಂತಿಲ್ಲ ಜನ - ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ಗೂ ಡೋಂಟ್ ಕೇರ್
ಬೆಂಗಳೂರು: ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರ ಕಾಲ ಲಾಕ್ಡೌನ್ ಘೋಷಿಸಿದೆ. ಅಲ್ಲದೆ ಲಾಕ್ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಜನರು ಲಾಕ್ಡೌನ್ ಬಗ್ಗೆ ಅಸಡ್ಡೆ ತೋರಿರೋದು ಗೊತ್ತಾಗ್ತಿದೆ. ಅಗತ್ಯ ಸೇವೆಗಳ ಹೊರತುಪಡಿಸಿ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಸರ್ಕಾರ ಮನವಿ ಮಾಡಿದರೂ ಸಹ ಕನಕಪುರ ರಸ್ತೆ ಬನಶಂಕರಿ ಬಳಿ ವಾಹನಗಳ ಅನಗತ್ಯ ಸಂಚಾರ ಕಂಡು ಬಂದಿದೆ.