ಕೊರೊನಾಗೆ ಹೆದರಬೇಡಿ, ಎಲ್ಲರೂ ಬಂದು ಮತದಾನ ಮಾಡಿ: ಹಾಸ್ಯ ನಟ ಸತೀಶ್! - ಹಾಸ್ಯ ನಟ ಸತೀಶ್
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ತನ್ನದೇ ಪಾತ್ರದ ಮೂಲಕ ಗಮನ ಸೆಳೆದ ಹಾಸ್ಯ ನಟ ಪಿ.ಡಿ ಸತೀಶ್ ಮೌಂಟ್ ಕಾರ್ಮೆಲ್ ಸ್ಕೂಲ್ನಲ್ಲಿ ಮತದಾನ ಮಾಡಿದ್ದಾರೆ. ಮತ ಚಲಾಯಿಸಿದ ನಂತರ ಮಾತನಾಡಿದ ಅವರು ಕೊರೊನಾಗೆ ಹೆದರಬೇಡಿ, ಎಲ್ಲರೂ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.