ಉಡುಪಿಯಲ್ಲೊಬ್ಬ ನಾಯಿ ಕಳ್ಳ... ಹೈಬ್ರೀಡ್ ಶ್ವಾನಗಳೇ ಈತನ ಟಾರ್ಗೆಟ್ - ಉಡುಪಿ ನಅಯಿ
ವೈದ್ಯರೊಬ್ಬರ ಮನೆಯ ಸಾಕು ನಾಯಿಯನ್ನು ಕಳವು ಮಾಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ವೈದ್ಯ ಸುರೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ನಾಯಿಯನ್ನು ಕಳ್ಳನೊಬ್ಬ ಎತ್ತಿಕೊಂಡು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ಬೆಳಗಿನ ಜಾವ 4.35ರ ಸುಮಾರಿಗೆ ಬಂದ ಕಳ್ಳ, ನಾಯಿಯನ್ನು ಕದ್ದು ಪರಾರಿಯಾಗಿದ್ದಾನೆ. ಬೆಳಗ್ಗೆ ಎದ್ದಾಗ ನಾಯಿಯನ್ನು ಕಾಣದೆ ಮನೆಯವರು ಸಿಸಿಟಿವಿ ದೃಶ್ಯ ಚೆಕ್ ಮಾಡಿದ್ದಾರೆ. ಈ ವೇಳೆ ಕಳ್ಳನ ಕೈಚಳಕ ಗೊತ್ತಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ನಾಯಿ ಕದ್ದ ಕಳ್ಳನನ್ನು ಹುಡುಕಿಕೊಡಿ ಎಂಬ ಮೆಸೇಜ್ ಉಡುಪಿಯಾದ್ಯಂತ ಹರಿದಾಡುತ್ತಿದೆ.