ಶ್ವಾನದ ಜೊತೆ ಸ್ನೇಹ ಬೆಳೆಸಿ ಕೋತಿಯ ಆಟ... ವಿಡಿಯೋ ವೈರಲ್ - Monkey-dog friendship in Raipur village
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಪುರ ಗ್ರಾಮಕ್ಕೆ ಲಗ್ಗೆ ಇಟ್ಟಿರುವ ಕೋತಿಯೊಂದು ಶ್ವಾನದ ಜೊತೆ ಗೆಳೆತನ ಬೆಳಸಿ ಆಟ ಆಡುತ್ತಿರುವ ದೃಶ್ಯ ವೈರಲ್ ಆಗಿದೆ. ಪ್ರತಿ ಶನಿವಾರ ಬೆಳಗ್ಗೆ ಗ್ರಾಮದ ದೇವಾಲಯದ ಬಳಿ ಬರುವ ಮೂರು ಕೋತಿಗಳ ಪೈಕಿ ಒಂದು ಕೋತಿ ಶ್ವಾನದ ಸ್ನೇಹ ಸಂಪಾದಿಸಿ ಆಟ ಆಡುತ್ತಿರುವ ದೃಶ್ಯವನ್ನು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.