ಚಿಕ್ಕಬಳ್ಳಾಪುರ: ನಾಯಿಗಳ ದಾಳಿಗೆ 7 ಕುರಿಗಳು ಸಾವು - ನಾಯಿಗಳ ದಾಳಿಗೆ 7 ಕುರಿಗಳು ಸಾವು
ನಾಯಿಗಳ ದಾಳಿಗೆ 7 ಕುರಿಗಳು ಸಾವನ್ನಪ್ಪಿದ್ದು 15 ಕುರಿಗಳು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಊಲವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾರಾಯಣಪ್ಪ ಎಂಬುವರು ತಮ್ಮ ಮನೆ ಸಮೀಪದಲ್ಲಿರುವ ತೋಟದಲ್ಲಿ ಕುರಿಗಳನ್ನು ಸಾಕುತ್ತಿದ್ದು, ಏಕಾಏಕಿ ನಾಯಿಗಳು ದಾಳಿ ನಡೆಸಿವೆ ಎನ್ನಲಾಗ್ತಿದೆ. ಅಂದಾಜು 50 ಸಾವಿರಕ್ಕೂ ಅಧಿಕ ನಷ್ಟವುಂಟಾಗಿದ್ದು, ರೈತನಿಗೆ ದಿಕ್ಕು ತೋಚದಂತಾಗಿದೆ. ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂದು ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.