ಕರ್ನಾಟಕ

karnataka

ETV Bharat / videos

ಕರ್ತವ್ಯ ನಿರ್ವಹಿಸುತ್ತಲೇ ಹಾವೇರಿಯಲ್ಲಿ ವೈದ್ಯರ ದಿನಾಚರಣೆ - Doctors day

By

Published : Jul 1, 2020, 8:02 PM IST

ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ. ಪ್ರತಿವರ್ಷ ದಿನಾಚರಣೆ ಆಚರಿಸುತ್ತಿದ್ದ ವೈದ್ಯರು ಪ್ರಸ್ತುತ ವರ್ಷ ಕೊರೊನಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಹಾವೇರಿಯ ಫೀವರ್ ಕ್ಲಿನಿಕ್‌ನಲ್ಲಿ ಎಂದಿನಂತೆ ಇಂದು ಸಹ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಕಂಡು ಬಂತು. ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾಯಕದಲ್ಲಿ ವೈದ್ಯರು ನಿರತರಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು, ಪ್ರತಿವರ್ಷ ವೈದ್ಯರ ದಿನಾಚರಣೆಯನ್ನ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ ಪ್ರಸ್ತುತ ವರ್ಷ ಕೊರೊನಾ ಇರುವ ಕಾರಣ ಸಡಗರ ಸಂಭ್ರಮ ಇಲ್ಲ. ಆದರೆ ಈ ದಿನ ಸಹ ನಾವು ಕೊರೊನಾ ವಾರಿಯರ್ಸ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ತಮಗೆ ಹೆಮ್ಮೆಯಾಗುತ್ತಿದೆ ಎಂದರು.

ABOUT THE AUTHOR

...view details