ತುಮಕೂರಲ್ಲಿ ಮೊದಲ ಲಸಿಕೆ ಪಡೆದ ಡಾ.ವೀರಭದ್ರಯ್ಯ: ಈಟಿವಿ ಜೊತೆ ಅನುಭವ ಹಂಚಿಕೊಂಡ ವೈದ್ಯ - ತುಮಕೂರಲ್ಲಿ ಮೊದಲ ಕೊವಿಶೀಲ್ಡ್ ಲಸಿಕೆ ಪಡೆದ ಡಾ.ವೀರಭದ್ರಯ್ಯ
ತುಮಕೂರು:ಇಂದು ದೇಶದಾದ್ಯಂತ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅದರಂತೆ ಜಿಲ್ಲೆಯಲ್ಲೂ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇಂದು ಜಿಲ್ಲೆಯಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಎಂಬುವವರು ಪಡೆದುಕೊಂಡರು. ಇನ್ನು ಲಸಿಕೆ ಪಡೆದ ಅನುಭವವನ್ನು ಅವರು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.