ವಿದೇಶಿ ಮಾದರಿ ಶಿಕ್ಷಣಕ್ಕಾಗಿ ಸಿದ್ದಾರ್ಥ್ ನಿರ್ಮಿಸಿದ ಶಾಲೆ ಹೇಗಿದೆ ಗೊತ್ತೇ? - ಸಿದ್ಧಾರ್ಥ್ ನಾಪತ್ತೆ ಪ್ರಕರಣ
ಚಿಕ್ಕಮಗಳೂರು: ಕಾಫೀ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಅವರು ಮಕ್ಕಳಿಗೆ ವಿದೇಶಿ ಗುಣಮಟ್ಟದಲ್ಲಿ ಉತ್ತಮವಾದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ, ಹಲವು ವರ್ಷಗಳ ಹಿಂದೆ ಚಿಕ್ಕಮಗಳೂರು ಟು ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬರ್ ವ್ಯಾಲಿ ಇಂಟರ್ ನ್ಯಾಷನಲ್ ರೆಸಿಡೆಸ್ಸಿಯಲ್ ಸ್ಕೂಲ್ ನಿರ್ಮಿಸಿದ್ದರು. ಜಿಲ್ಲೆ, ರಾಜ್ಯ, ದೇಶದ ವಿವಿಧ ಭಾಗ ಸೇರಿದಂತೆ ವಿದೇಶದ ಮಕ್ಕಳೂ ಸಹ ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಿದ್ದಾರ್ಥ್ ಅವರ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆಯೇ ಇಂದು ಶಾಲೆಗೆ ರಜೆ ನೀಡಲಾಗಿದೆ. ಶಾಲೆಯ ಅವರಣದಲ್ಲಿ ನೀರವ ಮೌನ ಆವರಿಸಿದೆ.