ಕಂಬಳ ಬೇರೆ, ಉಸೇನ್ ಬೋಲ್ಟ್ ಓಟವೇ ಬೇರೆ: ಐಕಳ ದೇವಿ ಪ್ರಸಾದ್ ಶೆಟ್ಟಿ - ರಾಷ್ಟ್ರೀಯ ಕ್ರೀಡೆಯಾಗಿ ಪರಿವರ್ತಿಸಿ
ಉಡುಪಿ: ಕಂಬಳವೇ ಬೇರೆ, ಉಸೇನ್ ಬೋಲ್ಟ್ ಓಟವೇ ಬೇರೆ. ಆದರೂ, ಟ್ರ್ಯಾಕ್ ಮತ್ತು ಕೆಸರಿನ ಓಟಕ್ಕೆ ತುಂಬಾ ಸಾಮ್ಯತೆ ಇದೆ. ಕಂಬಳ ಓಟಗಾರರನ್ನು ಇನ್ನಷ್ಟು ಮಿಂಚುವಂತೆ ಮಾಡಲು ಕಂಬಳವನ್ನು ರಾಷ್ಟ್ರೀಯ ಕ್ರೀಡೆಯಾಗಿ ಪರಿವರ್ತಿಸಬೇಕಾಗಿದೆ ಎಂದು ಕಂಬಳ ಆಯೋಜಕ ಐಕಳ ದೇವಿ ಪ್ರಸಾದ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.