ಡಿಕೆಶಿ ಟೆಂಪಲ್ ರನ್: ಮೈಸೂರಿನ ದೇವಾಲಯಗಳಲ್ಲಿ ಹರಕೆ ತೀರಿಸಿದ ಮಾಜಿ ಸಚಿವ - ನಂಜನಗೂಡು ನಂಜುಂಡೇಶ್ವರ ದೇವಸ್ಥಾನ ಡಿಕೆಶಿ ಭೇಟಿ
ಮೈಸೂರು: ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಮೈಸೂರಿನಲ್ಲಿ ಕೂಡ ಟೆಂಪಲ್ ರನ್ ಮುಂದುವರಿಸಿದ್ದಾರೆ. ದಕ್ಷಿಣ ಕಾಶಿಯೆಂದೇ ಖ್ಯಾತಿ ಪಡೆದಿರುವ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಅವರಿಗೆ ಒಡ್ಡೊಲಗದೊಂದಿಗೆ ಸ್ವಾಗತ ಕೋರಲಾಗಿತ್ತು. ಇದೇ ವೇಳೆ ದೇವರ ದರ್ಶನ ಪಡೆದ ಅವರು, ತಮ್ಮ ಪತ್ನಿ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು.