ಕರ್ನಾಟಕ

karnataka

ETV Bharat / videos

ಡಿಕೆಶಿ ಕಸ್ಟಡಿಗೆ ಕೊಟ್ಟಿರುವುದು ಬಿಜೆಪಿ ಅಲ್ಲ ನ್ಯಾಯಾಲಯ: ಸಚಿವ ಸಿ.ಟಿ ರವಿ - ಐಬಿಪಿಎಸ್ ಪರೀಕ್ಷೆ

By

Published : Sep 14, 2019, 2:48 PM IST

ಡಿಕೆಶಿಯನ್ನ ಕಸ್ಟಡಿಗೆ ಕೊಟ್ಟಿರೋದು ಬಿಜೆಪಿ ಅಲ್ಲ, ನ್ಯಾಯಾಲಯ, ಯಾರೂ ಕಾನೂನಿಗಿಂತ, ನ್ಯಾಯಾಲಯಕ್ಕಿಂತ ಅತೀತರಲ್ಲ ಎಂದು ಡಿಕೆಶಿ ಪ್ರಕರಣಕ್ಕೆ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದರು‌. ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದವರು ಸಂವಿಧಾನ, ದೇಶಕ್ಕಿಂತ ನಾವೇ ದೊಡ್ಡವರು ಅಂದ್ಕೊಂಡಿದ್ದಾರೆ. ಡಿಕೆಶಿಯ ಮೆರಿಟ್, ಡಿಮೆರಿಟ್ ಡಿಸೈಡ್ ಮಾಡಬೇಕಿರೋದು ಕೋರ್ಟ್. ಡಿಕೆಶಿ ಅಪರಾಧಿಯೋ, ನಿರಪರಾಧಿಯೋ ನ್ಯಾಯಾಲಯ ಹೇಳಬೇಕು ಹೊರೆತು ನಾವು ಹೇಳಲು ಬರುವುದಿಲ್ಲ ಎಂದು ಕೈ ನಾಯಕರಿಗೆ ಟಾಂಗ್ ನೀಡಿದರು. ಇನ್ನೂ ಐಬಿಪಿಎಸ್ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆ ಕಡೆಗಣನೆ ಇದೇ ಮೊದಲಲ್ಲ. ಮೊದಲಿನಿಂದಲೂ ಕಡೆಗಣನೆ ಆಗುತ್ತಿದೆ, ಅದನ್ನ ಸರಿಪಡಿಸುವಂತೆ ಮನವಿ ಮಾಡುತ್ತೇವೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.

ABOUT THE AUTHOR

...view details