ಬೆಳಗಾವಿ ಜನರು ನನ್ನನ್ನು ಸ್ವಾಗತಿಸಿದ್ದಾರೆ.. ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶಕ್ಕೆ ಡಿಕೆಶಿ ವ್ಯಂಗ್ಯ - ಡಿ ಕೆ ಶಿವಕುಮಾರ್ ಲೇಟೆಸ್ಟ್ ನ್ಯೂಸ್
ಬೆಳಗಾವಿ : ಬೆಳಗಾವಿ ಜನತೆ ನನ್ನನ್ನು ಸ್ವಾಗತಿಸಿದ್ದಾರೆ. ಅದಕ್ಕಾಗಿ ಬಹಳ ಸಂತೋಷ ಪಡುತ್ತೇನೆ. ಅವರ ಸ್ವಾಗತದ ಮೂಲಕ ನನಗೆ ಶಕ್ತಿ ತುಂಬುತ್ತಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಳಗಾವಿಗೆ ತಾವು ಆಗಮಿಸಿದ್ದಕ್ಕಾಗಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶ ಹೊರ ಹಾಕಿದ ವಿಚಾರಕ್ಕೆ ಡಿಕೆಶಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.