ಡಿಕೆಶಿ ಭರ್ಜರಿ ರೋಡ್ ಶೋ... ಬೃಹತ್ ಹಾರದಲ್ಲಿನ ಸೇಬಿಗಾಗಿ ಕಾರ್ಯಕರ್ತರ ಫೈಟ್ - undefined
ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರವಾಗಿ ನೆಲಮಂಗಲದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಭರ್ಜರಿ ರೋಡ್ ಶೋ ನಡೆಸಿದರು. ದೇಶದ ಒಗ್ಗಟ್ಟಿಗಾಗಿ ನಾವು ಒಂದಾಗಿದ್ದೇವೆ, ಬಿಜೆಪಿಯನ್ನ ಅಧಿಕಾರದಿಂದ ದೂರ ಈಡಲು ನಮ್ಮ ಮೈತ್ರಿ ಎಂದರು. ನಗರದ ಪೊಲೀಸ್ ಠಾಣೆಯಿಂದ ರೋಡ್ ಶೋ ಶುರುಮಾಡಿ ಬಸ್ ನಿಲ್ದಾಣದಲ್ಲಿ ಮುಕ್ತಾಯ ಮಾಡಲಾಯಿತು. ಇದೇ ವೇಳೆ ಡಿಕೆಶಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಕಾರ್ಯಕರ್ತರು ಸಂಭ್ರಮ ಪಟ್ಟರು. ಬಳಿಕ ಆ್ಯಪಲ್ಗಾಗಿ ಕಾರ್ಯಕರ್ತರು ಕಿತ್ತಾಡತೊಡಗಿದರು.