ಕರ್ನಾಟಕ

karnataka

ETV Bharat / videos

ನಾರಾಯಣ ರಾವ್ ನಿಧನ ಅನಿರೀಕ್ಷಿತ; ನಮ್ಮ ನಿರೀಕ್ಷೆ ಹುಸಿಯಾಯಿತು: ಡಿಕೆಶಿ - ಡಿ.ಕೆ ಶಿವಕುಮಾರ್​ ಸುದ್ದಿ

🎬 Watch Now: Feature Video

By

Published : Sep 24, 2020, 10:11 PM IST

ಬೆಂಗಳೂರು: ಬಸವ ಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್ ಅವರ ನಿಧನ ನಮಗೆ ಅನಿರೀಕ್ಷಿತ. ಅವರು ಗುಣಮುಖರಾಗಿ ಬರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸಿದ್ದೆವು, ಆದರೆ ನಮ್ಮ ಭರವಸೆ ಹುಸಿಯಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, 30 ವರ್ಷಗಳಿಂದ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ಹಿಂದಿನಿಂದಲೂ ಸರಳ ಕಾರ್ಯಕರ್ತರಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಅವರು ನಮ್ಮನ್ನು ಅಗಲಿರುವುದು ಬಹಳ ದುಃಖಕರವಾದ ಸುದ್ದಿ. ಕೋವಿಡ್ ಮಹಾಮಾರಿ ಇಂಥದೊಂದು ಆಘಾತ ನೀಡಲಿದೆ ಎಂದು ನಾವ್ಯಾರು ನಿರೀಕ್ಷಿಸಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಬರಲಿ ಎಂದು ಆಶಿಸುತ್ತೇನೆ. ಇವರ ಸಾವಿನಿಂದ ಕ್ಷೇತ್ರ ಹಾಗೂ ಪಕ್ಷ ಬಡವಾಗಿದೆ ಎಂದಿದ್ದಾರೆ.

ABOUT THE AUTHOR

...view details