ದೀಪಾವಳಿ ಹಬ್ಬದ ತಯಾರಿ.. ಹೂವು ಕೊಳ್ಳುವಲ್ಲಿ ಬ್ಯುಸಿಯಾದ ಜನತೆ - ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲಿಸದ ಗ್ರಾಹಕರು
ಹಾಸನ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಕೊರೊನಾ ನಡುವೆ ನಗರದ ಹೃದಯ ಭಾಗದ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆಗೆ ಬಂದ ಜನರು ಸಾಮಾಜಿಕ ಅಂತರ ಮರೆತಿದ್ದಾರೆ.