ಯಾದಗಿರಿಯಲ್ಲಿ ದೀಪಾವಳಿ ಆಚರಣೆಗೆ ಬೇಕಾದ ವಸ್ತುಗಳ ಖರೀದಿಗೆ ಜನರ ಹಿಂದೇಟು
ಯಾದಗಿರಿ: ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ರೈತರ ಬೆಳೆ ಹಾನಿಯಾಗಿದ್ದು, ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ ಸಂಭ್ರಮದ ದೀಪಾವಳಿ ಆಚರಣೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಲಾಭದ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ಕೂಡ ನಷ್ಟ ಅನುಭವಿಸುವಂತಾಗಿದೆ. ಪ್ರತಿ ವರ್ಷ ದಿಪಾವಳಿ ಹಬ್ಬದ ನಿಮಿತ್ತ ಜನರಿಂದ ಮಾರುಕಟ್ಟೆ ಕಿಕ್ಕಿರಿಯುತ್ತಿತ್ತು. ಆದರೀಗ ಜನರಿಲ್ಲಿದೇ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಯಾದಗಿರಿಯ ಗಾಂಧಿ ವೃತ್ತ ಸೇರಿದಂತೆ ನಗರದ ಹಲವೆಡೆ ವ್ಯಾಪಾರಸ್ಥರು ದೀಪಾವಳಿ ಹಬ್ಬದ ನಿಮಿತ್ತ ಬೇರೆ ಕಡೆಗಳಿಂದ ಖರೀದಿಸಿ ತಂದ ವಸ್ತುಗಳನ್ನ ಕೊಳ್ಳಲು ಗ್ರಾಹಕರು ಇಲ್ಲದ ಕಾರಣ ಮಾರುಕಟ್ಟೆ ಸಂಪೂರ್ಣ ಡಲ್ ಆಗಿದೆ.